ಅಸೆಸ್ಮೆಂಟ್- 10


ಕೋವಿಡ್ 19 ವೈರಸ್ ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟ ಗೊಳಿಸುವಲ್ಲಿ ನಮ್ಮ ಸಲಹೆಗಳು ಮತ್ತು ಕಾರ್ಯತಂತ್ರಗಳ ಪಟ್ಟಿ


 ಕೊರನಾ ವೈರಸ್ ಎಂಬ ಹೆಮ್ಮಾರಿ ಇಂದ ಇಡೀ ದೇಶವೇ ತಲ್ಲಣಗೊಂಡಿದೆ.ಆರ್ಥಿಕ ನಷ್ಟದ ಜೊತೆಗೆ ಮಾನಸಿಕ ನೆಮ್ಮದಿಯನ್ನು ಕದಡಿದೆ. ಅದೇ ಶಿಕ್ಷಣ ಕ್ಷೇತ್ರವು ತಲ್ಲಣಗೊಂಡಿದೆ. ಶಾಲಾ-ಕಾಲೇಜುಗಳು ಸ್ತಬ್ದಗೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆಗೆ ಕೆಳಗಿನ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬಹುದು. 

* ವಿದ್ಯಾರ್ಥಿಗಳಿಗೆ ಓದಲು ವೇಳಾಪಟ್ಟಿಯ ರಚನೆ. 
* ವಿದ್ಯಾರ್ಥಿಗಳು ನಿರಂತರವಾಗಿ ಓದಲು ಪ್ರೇರೇಪಿಸುವುದು. 
* ಕಲಿಕೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಮಾಡಲು ಪ್ರೋತ್ಸಾಹಿಸುವುದು. 
* ದೂರವಾಣಿಯ ಮೂಲಕ ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಲು ಹೇಳುವುದು. 
* ವಿದ್ಯಾರ್ಥಿಗಳ ವಾಟ್ಸಪ್ ಗ್ರೂಪ್ ಗಳನ್ನು ರಚಿಸಿ ಪಠ್ಯಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಹಾಕುವುದು. 
* ಆನ್ಲೈನ್ ತರಗತಿಗಳು ಲಿಂಕನ್ನು ಗಳಿಸುವುದರ ಮೂಲಕ ಪಠ್ಯವನ್ನು ಬೋಧಿಸಿ. 
* ಆನ್ಲೈನ್ ಮೂಲಕ ಕಿರು ಪರೀಕ್ಷೆಗಳನ್ನು ತೆಗೆದುಕೊಳ್ಳುವುದು. 
* ದೂರದರ್ಶನದಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ನೋಡುವಂತೆ ಪ್ರೇರೇಪಿಸುವುದು. 
* ಪ್ರಮುಖ ಅಂಶಗಳನ್ನು ಪುಸ್ತಕದಲ್ಲಿ ಪಟ್ಟಿ ಮಾಡಿಕೊಳ್ಳಲು ತಿಳಿಸುವುದು. 
* ಹತ್ತಿರದ ಗೆಳೆಯರೊಂದಿಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಪಟ್ಟದಹತ್ತಿರದ ಗೆಳೆಯರೊಂದಿಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಅಭ್ಯಾಸದ  ಬಗ್ಗೆ ಚರ್ಚಿಸುವುದು. 
* ಆರೋಗ್ಯದ ಬಗ್ಗೆ ಸುರಕ್ಷತೆಯನ್ನು ತಿಳಿಸುವುದು. 
* ಅಭ್ಯಾಸದಲ್ಲಿ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸುವುದು. 
* ಯುಟ್ಯೂಬಿನಲ್ಲಿ ಪಠ್ಯಕ್ಕೆ ಸಂಬಂಧಿಸಿದ ವೀಡಿಯೊಗಳನ್ನು ವೀಕ್ಷಿಸಲು ಹೇಳುವುದು. 
* ದೂರವಾಣಿ ಕರೆಗಳ ಮೂಲಕ ಮಕ್ಕಳೊಂದಿಗೆ ನಿರಂತರ ಸಂಪರ್ಕ ಹೊಂದುವುದು. 
            ಈ ಮೇಲಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಮಕ್ಕಳ ಕಲಿಕೆಯನ್ನು ಉತ್ಕೃಷ್ಟ ಗೊಳಿಸಬಹುದು. 

Comments

Popular posts from this blog

SSLC ಇ-ಸಂವೇದ ಗಣಿತದ ವೀಡಿಯೋಗಳು